ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಮಿತಿಯ ಪದಾಧಿಕಾರಿಗಳ ನೇಮಕಾತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅನುಮೋದಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಾಜಿಕ ಜಾಲತಾಣ ಸಮಿತಿಯ ಅಧ್ಯಕ್ಷರಾಗಿ ಪೂರ್ಣೇಶ್ ಕುಮಾರ್ ಭಂಡಾರಿ, ಪ್ರಧಾನ ಕಾರ್ಯದರ್ಶಿಗಳಾಗಿ ರಿಕ್ಷನ್ ಕ್ಲೈವ್ ಲೋಬೊ, ಮನ್ಸೂರ್ ಕೆ.ಎಂ ಹರೇಕಳ, ವಿಕ್ರಂ ಶೆಟ್ಟಿ ಅಂತರ, ಪ್ರವೀಣ್ ರೋಡ್ರಿಗಸ್, ಚಂದ್ರಿಕಾ ಸುರತ್ಕಲ್, ಕ್ಲ್ಯಾರಿಯೊ ಸುಸ್ಮಿತ್ ಡಿಸೋಜ, ಪ್ರಕಾಶ್.ಪಿ ಪುರುಷರಕಟ್ಟೆ, ನಝೀರ್ ಬಾರ್ಲಿ, ನಿತಿನ್ ಗೌಡ ಎನೆಕಲ್ಲು, ಸಿದ್ಧಾರ್ಥ್ ಕಾಮತ್, ಗಣೇಶ್ ಕಣಿಯೂರ್, ರಿತೇಶ್ ಅಂಚನ್ ಹಾಗೂ ಉನೈಸ್ ಗಡಿಯಾರ ನೇಮಕಗೊಂಡಿದ್ದಾರೆ.