ಮಂಗಳೂರು: ವಾಯನಾಡು, ಶಿರೂರು ಸೇರಿದಂತೆ ದೇಶದ ವಿವಿಧೆಡೆ ಭೀಕರ ಮಳೆ-ಪ್ರವಾಹ ದುರಂತಿಂದ ಮೃತಪಟ್ಟವರಿಗೆ ಮಂಗಳೂರು ಸಾಮರಸ್ಯ ವೇದಿಕೆ ವತಿಯಿಂದ ಶುಕ್ರವಾರ ನಗರದ ಲಾಲ್ ಭಾಗ್ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಮೊಂಬತ್ತಿ ಹಿಡಿದು ಸಂತಾಪ ಸೂಚಿಸಲಾಯಿತು.
ಈ ಸಂದರ್ಭ ಸಾಮರಸ್ಯ ವೇದಿಕೆಯ ಅಧ್ಯಕ್ಷೆ ಮಂಜುಳಾ ನಾಯಕ್, ಮಾಜಿ ಡಿಪ್ಯೂಟಿ ಮೇಯರ್ ಮೊಹಮ್ಮದ್ ಕುಂಜತ್ತಬೈಲ್, ಶಿರಡಿ ಸಾಯಿ ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸ್ ಕುಮಾರ್ ದಾಸ್, ಪಾಲಿಕೆಯ ಮಾಜಿ ಸದಸ್ಯ ಪದ್ಮನಾಭ್ ಪಣಿಕರ್, ವೃಕ್ಷ್ ಗಾಯ್ ಫೌಂಡೇಶನ್ ನ ನೀತ್ ಶರಣ್, ರಾಜೇಶ್ ದೇವಾಡಿಗ, ರವಿರಾಜ್ ಪೂಜಾರಿ, ಟಿ.ಸಿ ಗಣೇಶ್, ವಿದ್ಯಾ ಶೆಣೈ, ಸುನೀಲ್ ಬಜಿಲಕೇರಿ, ರವಲ್ನಥ್ ಕಾಮತ್, ಸೀತಾರಾಮ್ ಶೆಟ್ಟಿ, ಮನೋಜ್ ಊರ್ವಾ, ಚಂದಾವಕರ್, ರಮಣಿ ಉಮೇಶ್, ಮೋಹಿನಿ, ಕಿಶೋರ್, ಲ್ಯಾನ್ಸಿ, ಕರಾವಳಿ ಹಾಲುಮತ ಕುರುಬರ ಸಂಘದ ಅಧ್ಯಕ್ಷ ಚಂದ್ರಪ್ಪ, ಬಿ.ಕೆ ಸಂಗಪ್ಪ ಬಡಕನ್ನವರು, ಮುತ್ತಣ್ಣ, ಎಸ್.ಶಾಂತಪ್ಪನವರು, ಹನುಮಂತ ಸಂಗೊಂದಿ, ಶಿವಪ್ಪ ಕುರಿ, ಹನುಮಂತ ಕುಷ್ಟಗಿ, ಮಂಜುನಾಥ ಎಮ್, ಯುವ ನಾಯಕರಾದ ಇಶಾನ್ ಶಾಹಿಮ್, ಅಲ್ದೇನ್ , ವಿಹಾನ್, ಶರಣ್, ಶಯಾನ್ ಮತ್ತಿತರರು ಉಪಸ್ಥಿತರಿದ್ದರು.
ಗೂಡಂಗಡಿ ತೆರವು ಕಾರ್ಯಾಚರಣೆ| ಗುಬ್ಬಿ ಮೇಲೆ ಬ್ರಾಹ್ಮಸ್ತ್ರ ಪ್ರಯೋಗ: ಮಂಜುಳಾ ನಾಯಕ್