ಮಂಗಳೂರು: ಪವಿತ್ರ ಹಜ್ ನಿರ್ವಹಿಸಲು ಹೊರಡುತ್ತಿರುವ ಮೊಹಮ್ಮದ್ ಶರೀಫ್ ದೇರಳಕಟ್ಟೆ ಅವರಿಗೆ ಗೆಳೆಯರ ಬಳಗ ಮಂಗಳೂರು ವತಿಯಿಂದ ಸೋಮವಾರ ನಗರದ ಮುಸ್ಲಿಂ ಸೆಂಟ್ರಲ್ ಸಭಾಂಗಣದಲ್ಲಿ ವಿನೂತನ ಬೀಳ್ಕೊಡುಗೆ ಸಮಾರಂಭ ಆಯೋಜಿಸಿ ಮಾದರಿಯಾದರು.
ಕಂದಕ್ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಅವರು ದುಆ ನೆರವೇರಿಸಿ ಪುಣ್ಯ ಹಜ್ ಕರ್ಮಗಳ ಬಗ್ಗೆ ಸಂದೇಶ ನೀಡಿದರು. ಬಳಿಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್, ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹಾಜಿ ಮೊಹಮ್ಮದ್ ಹನೀಫ್, ಮ.ನ.ಪಾ ಸದಸ್ಯರಾದ ಅಬ್ದುಲ್ ರವೂಫ್ ಬಜಾಲ್, ಸಂಶುದ್ದೀನ್ ಕುದ್ರೋಳಿ, ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿ ಕಾರ್ಯಕ್ರಮದ ಕುರಿತು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮೂಡಾ ಸದಸ್ಯ ಅದ್ದು ಕೃಷ್ಣಾಪುರ, ಮ.ನ.ಪಾ ಸದಸ್ಯೆ ಝೀನತ್ ಸಂಶುದ್ದೀನ್, ಸುರತ್ಕಲ್ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಶ್ರಫ್ ಕಾನ, ಫುಟ್ ಬಾಲ್ ಜಿಲ್ಲಾಧ್ಯಕ್ಷ ಡಿ.ಎಂ.ಅಸ್ಲಾಂ, ವಕೀಲ ಮುಖ್ತಾರ್, ಸಿ.ಎಂ.ಹನೀಫ್, ನಝೀರ್ ಬಜಾಲ್, ಸಂಸುದ್ದೀನ್ ಬಂದರ್, ಯು.ಬಿ.ಸಲೀಂ ಉಳ್ಳಾಲ, ಡಿ.ಎಂ.ಮುಸ್ತಫಾ, ಆರೀಫ್ ಬಂದರ್, ಇಮ್ರಾನ್ ಎ.ಆರ್, ಹೈದರ್ ಬೋಳಾರ್, ಮುಸ್ತಫಾ ಹರೇಕಳ, ಫಾರೂಖ್ ಪಾಂಡೇಶ್ವರ, ಸಿರಾಜ್ ಕಂದಕ್, ಹೈದರ್ ಕಂದಕ್, ಫೈಝಲ್ ಕಂದಕ್, ಸಿದ್ದೀಕ್ ಕಂದಕ್, ಅಲ್ತಾಫ್ ಕಂದಕ್, ಬದ್ರುದ್ದೀನ್ ಕಂದಕ್, ಆರೀಫ್, ತೌಸೀಫ್, ಆಸೀಫ್ ಕಂದಕ್, ಶಾಝ್, ಮುಖ್ತಾರ್ ಕಂದಕ್, ರಹೀಂ, ತ್ವಾಹ ಕಂದಕ್, ಝಹೀರ್ ಕಂದಕ್, ನೌಶೀರ್, ಸಲೀಂ, ಕಬೀರ್, ಕೆ.ಪಿ.ಮೊಯಿದ್ದೀನ್ ಕಂದಕ್, ಜುನೈದ್ ಪಾಂಡೇಶ್ವರ, ಮುನೀರ್ ಮುಕ್ಕಚ್ಚೇರಿ, ಮುಸ್ತಫಾ ಕಸೈಗಲ್ಲಿ, ಎನ್.ಕೆ.ಅಬೂಬಕ್ಕರ್, ಸ್ವಾಲಿ ಕಂದಕ್, ಹನೀಫ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಕಂದಕ್ ಸ್ವಾಗತಿಸಿದರು. ಮನ್ಸೂರ್ ಕುದ್ರೋಳಿ ವಂದಿಸಿದರು.