ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಚುನಾವಣಾ ಆಯುಕ್ತರಆಯ್ಕೆಸಮಿತಿಯ ಸಭೆಗುರುವಾರ ನಡೆದಿದ್ದು, ನಿವೃತ್ತ ಐಎಎಸ್ ಅಧಿಕಾರಿಗಳಾದಕೇರಳದಜ್ಞಾನೇಶ್ ಕುಮಾರ್ಹಾಗೂ ಪಂಜಾಬ್ನ ಸುಖಬೀರ್ ಸಂಧುಅವರನ್ನು ನೂತನ ಚುನಾವಣಾ ಆಯುಕ್ತರನ್ನಾಗಿನೇಮಿಸಲಾಗಿದೆ ಎಂದು ಸಮಿತಿಯ ವಿರೋಧ ಪಕ್ಷದ ಸದಸ್ಯ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.
ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಚೌಧರಿ, 212 ಅಧಿಕಾರಿಗಳ ಹೆಸರನ್ನು ಈ ಸಮಿತಿ ತಿಳಿಸಿತ್ತು. ಶಾರ್ಟ್-ಲಿಸ್ಟ್ ಮಾಡಲಾದ ಅಧಿಕಾರಿಗಳ ಹೆಸರುಗಳು ತನಗೆ ಮುಂಚಿತವಾಗಿ ಲಭ್ಯವಾಗಲಿಲ್ಲ. ಈ ಸಮಿತಿಯಲ್ಲಿ ಸರ್ಕಾರದ ಸದಸ್ಯರೇ ಹೆಚ್ಚಾಗಿದ್ದು, ಸರ್ಕಾರ ಏನು ಬಯಸುತ್ತದೋ ಅದು ನಡೆಯುತ್ತದೆ. ಸರ್ಕಾರ ನನಗೆ 212 ಹೆಸರುಗಳನ್ನು ನೀಡಿತ್ತು. ಆದರೆ ನೇಮಕಾತಿಗೆ 10 ನಿಮಿಷಗಳ ಮೊದಲು ಕೇವಲ 6 ಹೆಸರುಗಳನ್ನು ನೀಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
“ಈ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಇಲ್ಲ. ಸಿಜೆಐ ಮಧ್ಯಪ್ರವೇಶಿಸದಂತೆ ಸರ್ಕಾರವು ಅಂತಹ ಕಾನೂನನ್ನು ಮಾಡಿದೆ. ಕೇಂದ್ರ ಸರ್ಕಾರವು ಅವರಿಗೆ ಯಾರು ಬೇಕು ಅವರ ಹೆಸರನ್ನು ಆಯ್ಕೆ ಮಾಡಬಹುದು. ಅನುಸರಿಸುತ್ತಿರುವ ಕಾರ್ಯವಿಧಾನದಲ್ಲಿ ಲೋಪ ಇದೆ” ಎಂದು ಕಿಡಿಕಾರಿದ್ದಾರೆ.
ಈ ಮೊದಲಿದ್ದ ಅನೂಪ್ ಚಂದ್ರ ಪಾಂಡೆ ಅವರ ಅವಧಿ ಫೆ.14ರಂದು ಮುಕ್ತಾಯಗೊಂಡಿದೆ. ಇತ್ತೀಚಿಗೆ ಅರುಣ್ ಗೋಯೆಲ್ ಅವರು ದಿಢೀರ್ ರಾಜೀನಾಮೆ ನೀಡಿದ್ದ ಕಾರಣ ಚುನಾವಣಾ ಆಯುಕ್ತರ ಎರಡೂ ಹುದ್ದೆಗಳು ಖಾಲಿಯಾಗಿದ್ದವು. ಚುನಾವಣಾ ಆಯುಕ್ತರ ನೇಮಕಾತಿ ಕುರಿತಾದ ಹೊಸ ಕಾನೂನಿನಂತೆ ರಚಿಸಲಾದ ಸಮಿತಿಯು ನಡೆಸಿದ ಮೊದಲ ಆಯ್ಕೆಗಳು ಇವಾಗಿವೆ.