ಮಂಗಳೂರು: ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾಗಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರಜ್ ಚಂದ್ರ ಪಾಲ್ ಸೇರಿದಂತೆ 4 ನಾಲ್ವರನ್ನು ಸರಕಾರ ನಾಮನಿರ್ದೇಶನ ಮಾಡಿದೆ.
ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾಗಿ ಕದ್ರಿಯ ನೀರಜ್ ಚಂದ್ರ ಪಾಲ್, ಕಂಕನಾಡಿಯ ಸಬಿತಾ ಮಿಸ್ಕಿತ್, ಬೆಂಗ್ರೆಯ ಸುಮನ್ ದಾಸ್, ಕೃಷ್ಣಾಪುರದ ಅಬ್ದುಲ್ ಜಲೀಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡಿ ಆದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಲತಾ.ಕೆ ಆದೇಶದಲ್ಲಿ ತಿಳಿಸಿದ್ದಾರೆ.