ಮಂಗಳೂರು: ರಾಜ್ಯ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವ ದ.ಕ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನಾಳೆಯಿಂದ (ಫೆ.7) ನಡೆಯಲಿದೆ.
ಸಮಾವೇಶದ ಸ್ಥಳದಲ್ಲಿ ಹೊಸದಾಗಿ ನೋಂದಣಿ ಮಾಡುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಕೌಂಟರ್ ಹಾಗೂ ಯೋಜನೆಯ ಲಾಭ ಪಡೆಯುತ್ತಿರುವ ಫಲಾನುಭವಿಗಳ ಕುಂದುಕೊರತೆ ಪರಿಹರಿಸಲು ಪ್ರತ್ಯೇಕ ಕೇಂದ್ರವನ್ನು ತೆರೆಯಲಾಗುತ್ತದೆ.
ಮಾ.7: ಪುತ್ತೂರು ತಾಲೂಕಿನಲ್ಲಿ ಪೂರ್ವಾಹ್ನ 11ಕ್ಕೆ – ಕಿಲ್ಲೇ ಮೈದಾನದಲ್ಲಿ, ಮುಲ್ಕಿ ತಾಲೂಕಿನಲ್ಲಿ ಮಧ್ಯಾಹ್ನ 2:30ಕ್ಕೆ- ಮುಲ್ಕಿ ಗಾಂಧಿ ಮೈದಾನದಲ್ಲಿ ಹಾಗೂ ಮಂಗಳೂರು ತಾಲೂಕಿನಲ್ಲಿ ಸಂಜೆ 4:30ಕ್ಕೆ- ಲಾಲ್ ಭಾಗ್ ನ ಕರವಾಳಿ ಮೈದಾನದಲ್ಲಿ ಗ್ಯಾರಂಟಿ ಸಮಾವೇಶ ನಡೆಯಲಿದೆ.
ಮಾ.9: ಬೆಳ್ತಂಗಡಿ ತಾಲೂಕಿನಲ್ಲಿ ಬೆಳಿಗ್ಗೆ 10ಕ್ಕೆ- ಶ್ರೀಮತಿ ಕಿನ್ಯಮ್ಮ ಯಾನೆ ಗಣವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ ನಲ್ಲಿ, ಬಂಟ್ವಾಳ ತಾಲೂಕಿನಲ್ಲಿ ಮಧ್ಯಾಹ್ನ 2:30ಕ್ಕೆ- ಬಿ.ಸಿ.ರೋಡಿನ ನಾರಾಯಣ ವೃತ್ತ ಬಳಿಯ ಗೋಲ್ಡನ್ ಪಾರ್ಕ್ ನಲ್ಲಿ ಹಾಗೂ ಉಳ್ಳಾಲ ತಾಲೂಕಿನಲ್ಲಿ ಸಂಜೆ 4:30ಕ್ಕೆ- ಯುನಿಟಿ ಹಾಲ್ ಗ್ರೌಂಡ್ ನಲ್ಲಿ ಸಮಾವೇಶ ನಡೆಯಲಿದೆ.
ಮಾ.10: ಸುಳ್ಯ ತಾಲೂಕಿನಲ್ಲಿ ಬೆಳಿಗ್ಗೆ 10ಕ್ಕೆ- ಅಮರ ಜ್ಯೋತಿ ಕೆವಿಜೆಯಲ್ಲಿ, ಕಡಬ ತಾಲೂಕಿನಲ್ಲಿ ಮಧ್ಯಾಹ್ನ 2ಕ್ಕೆ- ಕಡಬದ ಸೈಂಟ್ ಜೋಕಿಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಮೂಡಬಿದ್ರೆ ತಾಲೂಕಿನಲ್ಲಿ ಸಂಜೆ 4:30ಕ್ಕೆ ಸ್ವರಾಜ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ.
5 guarantee scheme karnataka government