Thursday, April 10, 2025

ನಂದಿನಿ ಹಾಲಿನ ದರ ಪ್ರತಿ ಪ್ಯಾಕೆಟ್ ಗೆ ₹2 ಹೆಚ್ಚಳ

by eesamachara
0 comment

ಬೆಂಗಳೂರು: ಕರ್ನಾಟಕ ಹಾలు ಉತ್ಪಾದಕರ ಮಹಾಮಂಡಳದ (ಕೆಎಂಎಫ್) ಉತ್ಪನ್ನವಾದ ನಂದಿನಿ ಹಾಲಿನ ಅರ್ಧ ಲೀಟ‌ರ್ ಪ್ಯಾಕೆಟ್ ಹಾಗೂ ಒಂದು ಲೀಟರ್ ಹಾಲಿನ ಪ್ಯಾಕೆಟ್ ದರವನ್ನು ತಲಾ 2 ರೂ. ಅಂತೆ ಹೆಚ್ಚಿಸಲಾಗಿದ್ದು, ಬುಧವಾರದಿಂದಲೇ ಪರಿಷ್ಕೃತ ದರಗಳು ಜಾರಿಯಾಗಲಿವೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, “ಅರ್ಧ ಲೀಟರ್ ಮತ್ತು ಒಂದು ಲೀಟ‌ರ್ ಹಾಲಿನ ಪ್ಯಾಕೆಟ್‌ಗಳಿಗೆ ಮಾತ್ರ ತಲಾ 50 ml ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ, ಪ್ರತಿ ಪ್ಯಾಕೆಟ್‌ನ ದರವನ್ನು 2 ರೂ. ಹೆಚ್ಚಿಸಲಾಗಿದೆ. ಇನ್ನು ಮುಂದೆ ಗ್ರಾಹಕರಿಗೆ ಇಲ್ಲಿಯವರೆಗೆ ನೀಡಲಾಗುತ್ತಿದ್ದ ಅರ್ಧ ಲೀಟರ್ ಪ್ಯಾಕೆಟ್‌ನಲ್ಲಿ 550 ml, ಒಂದು ಲೀಟ‌ರ್ ಪ್ಯಾಕೆಟ್‌ನಲ್ಲಿ 1050 ml ಹಾಲು ಲಭ್ಯವಾಗಲಿದೆ” ಎಂದು ತಿಳಿಸಿದರು.

“ಜಿಲ್ಲಾ ಒಕ್ಕೂಟಗಳಿಂದ ಕೆಎಂಎಫ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಬರುತ್ತಿದೆ. ಪ್ರತಿದಿನ ಸಂಗ್ರಹವಾಗುತ್ತಿರುವ ಹಾಲಿನ ಪ್ರಮಾಣ 1 ಕೋಟಿ ಲೀಟರ್ ತಲುಪುತ್ತಿದೆ. ಹೆಚ್ಚುವರಿ ಹಾಲನ್ನು ಸಂಗ್ರಹಿಸಲು ಆಗುತ್ತಿಲ್ಲ. ಈ ಕಾರಣಕ್ಕಾಗಿ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಹೆಚ್ಚುವರಿಯಾಗಿ 50ml ಹಾಲು ನೀಡುತ್ತಿದ್ದು, ಹಾಲಿನ ದರ ಹೆಚ್ಚಿಸಿಲ್ಲ” ಎಂದು ಸ್ಪಷ್ಟಪಡಿಸಿದರು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios