ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟನೆ ಮತ್ತು ಕೆಪಿಸಿಸಿ ಕಾರ್ಯಕ್ರಮ ಅನುಷ್ಠಾನದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ವ್ಯಾಪ್ತಿಯ ವಿವಿಧ ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ ಬ್ಲಾಕ್‌ವಾರು ಸಂಯೋಜಕರನ್ನು ನೇಮಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಂಗಳವಾರ ಆದೇಶಿಸಿದ್ದಾರೆ.
ಬೆಳ್ತಂಗಡಿ ನಗರ ಬ್ಲಾಕ್ – ಸುರೇಶ್ ನಾವೂರ್, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ – ಉಷಾ ಅಂಚನ್, ಮೂಡಬಿದ್ರೆ ಬ್ಲಾಕ್- ಪ್ರವೀಣ್ ಚಂದ್ರ ಆಳ್ವ, ಮುಲ್ಕಿ ಬ್ಲಾಕ್ – ಅನಿಲ್ ಕುಮಾರ್, ಸುರತ್ಕಲ್ ಬ್ಲಾಕ್- ಟಿ.ಡಿ.ವಿಕಾಸ್ ಶೆಟ್ಟಿ, ಗುರುಪುರ ಬ್ಲಾಕ್- ಅಬ್ದುಲ್ ರವೂಫ್, ಮಂಗಳೂರು ನಗರ ಬ್ಲಾಕ್- ಮಹಾಬಲ ಮಾರ್ಲ, ಮಂಗಳೂರು ದಕ್ಷಿಣ ಬ್ಲಾಕ್- ಬಶೀರ್ ಬೈಕಂಪಾಡಿ, ಉಳ್ಳಾಲ ಬ್ಲಾಕ್- ಟಿ.ಕೆ.ಸುಧೀರ್, ಮುಡಿಪು ಬ್ಲಾಕ್- ಸದಾಶಿವ ಶೆಟ್ಟಿ ಸುರತ್ಕಲ್, ಬಂಟ್ವಾಳ ಬ್ಲಾಕ್- ಅಬೂಬಕ್ಕರ್ ಕುದ್ರೋಳಿ, ಪಾಣೆಮಂಗಳೂರು ಬ್ಲಾಕ್- ಕೃಷ್ಣ ಪ್ರಸಾದ್ ಆಳ್ವ, ಪುತ್ತೂರು ಬ್ಲಾಕ್- ರಂಜನ್ ಜಿ.ಗೌಡ, ವಿಟ್ಲ-ಉಪ್ಪಿನಂಗಡಿ ಬ್ಲಾಕ್-ಮಹೇಶ್ ರೈ ಕಾವು, ಸುಳ್ಯ ಬ್ಲಾಕ್- ಪ್ರದೀಪ್ ರೈ ಪಾಂಬರ್, ಕಡಬ ಬ್ಲಾಕ್- ಎ.ಸಿ.ವಿನಯರಾಜ್ ಅವರು ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.