ಮೂಡಬಿದ್ರೆ(ತೋಡಾರು): ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಮಿಜಾರು ಸಮೀಪದ ಆದರ್ಶ್ ಗರ್ಲ್ಸ್ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.
ಕಾಲೇಜಿನ ಒಟ್ಟು 45 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದು, 33 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗದ ಫಾತಿಮಾ ಶಾಹಿನ 544 (90.6%), ಫಾತಿಮಾ ನುಹಾ 543 (90.5%) ಆಯಿಷಾ ಎ.ಟಿ. 539 (89.8%), ಫಾತಿಮಾ ಶೆಹ್ಝಾನ 539 (89.8%), ಖತೀಜ ಅಶ್ಬ 532 (88.6%), ಯಶಾರ ಖಸ್ನ 531 (88.5%) , ಫಾತಿಮಾ ರಿಫ 522 (87%) , ಮರಿಯ ಸಾದಿಯ 515 (85.83%), ವಿಜ್ಞಾನ ವಿಭಾಗದ ಸಫ್ನಾಝ್ 543 (90.5%), ಹಾಝರ ಅಸ್ನ 542 (90.3%), ಫಾತಿಮಾ ಸಬೀದ 519 (86.5%) ಅಂಕಗಳನ್ನು ಪಡೆದು ಕಾಲೇಜಿಗೆ ಟಾಪರ್ ಆಗಿ ತೇರ್ಗಡೆಯಾಗಿದ್ದಾರೆ.