ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಮತ ವಿಭಜನೆಗಾಗಿ ಪ್ರಚಾರ ಪಡೆಯಲು ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಪ್ರಕಟಿಸಲಾಗಿದೆ. ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ನಂತರ ಈ ಪ್ರಕಟಣೆ ಪ್ರಚಾರದ ಮತ್ತೊಂದು ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
“2019 ರ ಡಿಸೆಂಬರ್‌ನಲ್ಲಿ ಸಂಸತ್ತು ಅನುಮೋದಿಸಿದ ಕಾನೂನಿಗೆ ನಿಯಮಗಳನ್ನು ತಿಳಿಸಲು ನರೇಂದ್ರ ಮೋದಿ ಸರ್ಕಾರ ನಾಲ್ಕು ವರ್ಷ ಮತ್ತು ಮೂರು ತಿಂಗಳು ತೆಗೆದುಕೊಂಡಿದೆ. ನಿಯಮಗಳ ಅಧಿಸೂಚನೆಗಾಗಿ ಒಂಬತ್ತು ವಿಸ್ತರಣೆಗಳನ್ನು ಕೋರಿದ ನಂತರ ಚುನಾವಣೆಯ ಮೊದಲು ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಮತ ವಿಭಜನೆಗಾಗಿ ಸಿಎಎ ಕಾಯ್ದೆಅಧಿಸೂಚನೆ ಪ್ರಕಟಿಸಲಾಗಿದೆ. ಸಿಎಎ ನಿಯಮಗಳನ್ನು ತಿಳಿಸಲು ತೆಗೆದುಕೊಂಡ ಸಮಯವು ಪ್ರಧಾನ ಮಂತ್ರಿಯ ಕಟುವಾದ ಸುಳ್ಳಿನ ಮತ್ತೊಂದು ಪ್ರದರ್ಶನವಾಗಿದೆ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.