ಕೈಕಂಬ (ಗುರುಪುರ): ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಜ್ಮನದಿನ ಪ್ರಯುಕ್ತ ಇನಾಯತ್ ಅಲಿ ಅಭಿಮಾನಿ ಬಳಗ ವತಿಯಿಂದ ಲಯನ್ಸ್ ಕ್ಲಬ್ ಮುಚ್ಚೂರು-ನೀರುಡೆ ಘಟಕದ ಸಹಯೋಗದೊಂದಿಗೆ ಜನಸ್ಪಂದನಾ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಡಿ.19ರಂದು ಗಂಜಿಮಠದ ಝಾರಾ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 9:30ರಿಂದ ಸಂಜೆ 5:30 ರವರೆಗೆ ನಡೆಯುವ ಜನಸ್ಪಂದನಾ ಕಾರ್ಯಕ್ರಮದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಹಾಗೂ ಶ್ರೀನಿವಾಸ್ ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಪ್ರಸಾದ್ ನೇತ್ರಾಲಯ ಮಂಗಳೂರು ಸಹಯೋಗದೊಂದಿಗೆ ಅತ್ಯಾಧುನಿಕ ಉಪಕರಣಗಳ ಜೊತೆ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಇದರ ಸಹಯೋಗದೊಂದಿಗೆ ಬೃಹತ್ ಸಾರ್ವಜನಿಕ ರಕ್ತಾದನ ಶಿಬಿರ ನಡೆಯಲಿದೆ.
ಗೃಹಲಕ್ಷ್ಮೀ ಯೋಜನೆಯ ಅರ್ಜಿಗಳ ಸ್ಥಿತಿ ಪರಿಶೀಲನೆ ಮತ್ತು ಪರಿಹಾರ, ಉಚಿತ ಆಧಾರ್ ನೋಂದಣಿ-ತಿದ್ದುಪಡಿ, ಮತದಾರರ ಪಟ್ಟಿಗೆ ಸೇರ್ಪಡೆ-ತಿದ್ದುಪಡಿ, ಆಯುಷ್ಮಾನ್ ಕಾರ್ಡ್, ಅಬಾ ಕಾರ್ಡ್, ಪಿಂಚಣಿ ಯೋಜನೆ, ವಿಧವಾ ವೇತನ ಯೋಜನೆ, ಅಂಗವಿಕಲರ ಕಾರ್ಡ್, ಸಂದ್ಯಾ ಸುರಕ್ಷಾ, ಕಿಸಾನ್ ಸಮ್ಮಾನ್ ಹಾಗೂ ಇತರ ಯೋಜನೆಗಳಿಗೆ ಉಚಿತವಾಗಿ ನೋಂದಣಿ ಸೌಲಭ್ಯ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. Inayat Ali