ಮಂಗಳೂರು: ಇತ್ತೀಚಿಗೆ ನಡೆದ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ದ. ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ, ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಸಂಘಟನಾ ಸಂಚಾಲಕ ಪ್ರೇಮ್ ನಾಥ್ ಪಿ. ಬಿ ಬಳ್ಳಾಲ್ ಭಾಗ್ ಮನೆಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿ ಮಾತುಕತೆ ನಡೆಸಿದರು.
ಇದೇ ವೇಳೆ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಲ್ ಭಾಗ್ ಅವರು ಸಮಾಜದ ಪರವಾಗಿ ವಿವಿಧ ಬೇಡಿಕೆಗಳನ್ನು ಗೃಹ ಸಚಿವರ ಮುಂದಿಟ್ಟು ಈಡೇರಿಕೆಗೆ ಮನವಿ ಮಾಡಿದರು.
ಈ ಸಂದರ್ಭ ರಾಜ್ಯ ಉಪಾಧ್ಯಕ್ಷ ಸುರೇಶ್.ಎಸ್.ಕೆ, ತುಳುನಾಡ್ ದೈವಾರಾಧನೆ ಸಂರಕ್ಷಣೆ ವೇದಿಕೆ ಅಧ್ಯಕ್ಷ ಭರತ್ ರಾಜ್, ಗಿರಿಯಪ್ಪ ಬಂಟ್ವಾಳ, ಎಂ.ಸಂಜೀವ, ಮೇಘ ರಾಜ್, ರಾಜ್ಯ ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ ನವೀನ್, ಡಿ.ವಿ.ನಯನ್, ದೀಪಕ್, ಕೌಶಿಕ್, ದಿನೇಶ್ ಆರ್.ಕೆ, ಸುಜಾತ, ಪೂವಮ್ಮ, ಸುಜಾತ ಪ್ರೇಮ್, ಸಂಗೀತ, ಲಕ್ಷ್ಮೀ, ಕುಸುಮ, ಹರೀಶ್.ಎಂ ಮತ್ತಿತರರು ಉಪಸ್ಥಿರಿದ್ದರು. G. Parameshwara