ದೆಹಲಿ: ಲೋಕಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ರೂಪಿಸುವ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಇಂದು (ಮಾ. 19) ಸಭೆ ನಡೆಸಲಿದ್ದು, ಪಕ್ಷದ ಪ್ರಣಾಳಿಕೆಯನ್ನು ಚರ್ಚಿಸಿ ಅದಕ್ಕೆ ಅಂತಿಮ ರೂಪ ನೀಡಲಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಮಾರ್ಚ್ 19 ಮತ್ತು 20ರಂದು ಸಭೆ ಸೇರುವ ಸಾಧ್ಯತೆ ಇದೆ. ಇದೇ ವೇಳೆ ಚುನಾವಣೆಗೆ ಪಕ್ಷದ ಉಳಿದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ.
ಭಾಗೀದಾರಿ ನ್ಯಾಯ’, ‘ಕಿಸಾನ್ ನ್ಯಾಯ’, ‘ನಾರಿ ನ್ಯಾಯ’, ‘ಶ್ರಮಿಕ ನ್ಯಾಯ’ ಮತ್ತು ‘ಯುವ ನ್ಯಾಯ’. ತಲಾ ಒಂದು ‘ನ್ಯಾಯ’ಕ್ಕೆ ಐದು ಗ್ಯಾರಂಟಿಗಳಂತೆ ಒಟ್ಟು 25 ಗ್ಯಾರಂಟಿಗಳನ್ನು ಈಗಾಗಲೇ ಪಕ್ಷವು ಘೋಷಣೆ ಮಾಡಿದೆ. ಅವುಗಳ ಆಧಾರದ ಮೇಲೆ ಚುನಾವಣೆಯನ್ನು ಎದುರಿಸುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.